ಸಂಗ್ರಹ ಚಿತ್ರ- ಬೆಂಗಳೂರು ನಗರದ ಫ್ಲೈ ಓವರ್ಬೆಂಗಳೂರು, ಅ.20: ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಫ್ ಮತ್ತು ಡೌನ್ ರಾಂಪ್ ಕ್ಯಾರೇಜ್ ವೆ (ಮಡಿವಾಳ ಬದಿ) ಲೂಪ್‍ಗಳ ಮತ್ತು ರಾಂಪ್ ಪ್ಲೈ ಓವರ್ ಸ್ಟೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ಅ.21ರಿಂದ 4 ತಿಂಗಳವರೆಗೆ ಎರಡು ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀ. ಬ್ಯಾರಿಕೇಡ್‍ಗಳನ್ನು ಹಾಕಿ ಸ್ಥಗಿತಗೊಳಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟನೆಯಲ್ಲಿ ತಿಳಿಸಿದೆ.ʼಸಾರ್ವಜನಿಕರ ಸಹಕಾರ ಕೋರಲಾಗುವುದು. ಇದರಿಂದಾಗುವ ಅನಾನುಕೂಲತೆಗೆ ವಿಷಾಧಿಸುತ್ತೇವೆ' ಎಂದು BMRCL ಪ್ರಕಟನೆ ತಿಳಿಸಿದೆ.‌ನಮ್ಮ ಮೆಟ್ರೋದ ನೀಲಿ ಮಾರ್ಗವು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.  