ಬೆಂಗಳೂರು, ಅ.15: ಆನ್‍ಲೈನ್ ಮೂಲಕ ದಂಧೆ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು 6 ಆರೋಪಿಗಳ ಬಂಧಿಸಿದ್ದಾರೆ.ಮಂಜುನಾಥ್, ಶಿವರಾಜ್, ಉಮೇಶ್, ಬಸವರಾಜ್, ರಾಯ, ಪ್ರದೀಪ್ ಬಂಧಿತರಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಲಾಗಿದೆ.  ಬಂಧಿತ ಆರೋಪಿಗಳು ಹುಡುಗಿಯರ ಫೋಟೊಗಳನ್ನು ವೆಬ್‍ಸೈಟ್ ಮೂಲಕ ಹಂಚಿ ಮೊಬೈಲ್ ನಂಬರ್ ಗಳ ಮೂಲಕ ಲಾಗಿನ್ ಆಗುವ ಗಿರಾಕಿಗಳನ್ನು ಸೆಳೆಯುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.  