ಸಾಂದರ್ಭಿಕ ಚಿತ್ರಬೆಂಗಳೂರು, ಅ.15: ಉಡುಪಿಯಿಂದ ಬೆಂಗಳೂರಿಗೆ ಕೆಎಸ್ಸಾರ್ಟಿಸಿಯ ಐರಾವತ ಬಸ್‍ನಲ್ಲಿ ಬರುತ್ತಿದ್ದ ಪ್ರಯಾಣಿಕನ ಬಳಿ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಆರೋಪ ಕೇಳಿಬಂದಿದೆ.60 ಗ್ರಾಂ ಬಂಗಾರದ ಕಂಠಿಹಾರ ಹಾಗೂ ಎರಡು ಉಂಗುರಗಳನ್ನು ಕಳ್ಳತನ ಮಾಡಿದ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ರಾಘವೇಂದ್ರ ಎಂಬುವರಿಗೆ ಸೇರಿದ ಚಿನ್ನಾಭರಣ ಇದಾಗಿದ್ದು, ಜಾಲಹಳ್ಳಿ ಕ್ರಾಸ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.  