ಸಾಂದರ್ಭಿಕ ಚಿತ್ರಬೆಂಗಳೂರು, ಅ.15: ಯುವಕನೋರ್ವನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.ಇಲ್ಲಿನ ಕೋಗಿಲು ಲೇಔಟ್‍ನಲ್ಲಿ ಮೃತದೇಹ ಪತ್ತೆಯಾಗಿದ್ದು, ಬಿಹಾರ ಮೂಲದ ಶಕೀಲ್ ಅಖ್ತರ್ ಸೈಫಿ (28) ಎಂದು ಗುರುತಿಸಲಾಗಿದೆ.  ಕೋಗಿಲು ಲೇಔಟ್‍ನ ಮೂರನೆ ಕ್ರಾಸ್‍ನಲ್ಲಿ ಶಕೀಲ್ ವಾಸವಿದ್ದರು. ಆದರೆ ಹತ್ಯೆಗೈದು ಬೆಡ್ ಶೀಟ್‍ನಲ್ಲಿ ಮೂಟೆ ಕಟ್ಟಿರುವ ಸ್ಥಿತಿಯಲ್ಲಿ ಅವರ ಶವ ರವಿವಾರ ಗುಂಡಿಯಲ್ಲಿ ಪತ್ತೆಯಾಗಿದೆ. ಮುಂಜಾನೆ ಶವವನ್ನು ಗುರುತಿಸಿದ ಸ್ಥಳೀಯರು ಸಂಪಿಗೆಹಳ್ಳಿ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.