 ವಿ. ಸೋಮಣ್ಣ ಮೈಸೂರು: ನಾನು ಬಿಜೆಪಿ ಪಕ್ಷಕ್ಕೆ ಬರುವವರೆಗೆ ನಾನು ಸೋತಿರಲಿಲ್ಲ, ಆದರೆ ಬಿಜೆಪಿಗೆ ಬಂದ ನಂತರ 4-5 ಬಾರಿ ನಾನು ಸೋತಿದ್ದೇನೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರವಿವಾರ ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸೋತಿರಲಿಲ್ಲ ಇಲ್ಲ. ಕಾಂಗ್ರೆಸ್ ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ ಆದರೆ ಬಿಜೆಪಿಗೆ ಬಂದು ಸೋತೆ. ನಾನು ಏನಾಗಿ ಬಿಡುತ್ತೇನೋ ಅನ್ನುವ ಭಯದಲ್ಲಿ ಸೋಲಿಸಿದರು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.ನಮ್ಮವರೇ ನಮ್ಮ ಕಾಲು ಎಳೆಯುವುದು ಬಿಡಬೇಕು, ನಮ್ಮವರೇ ನಮ್ಮವರನ್ನು ಮೂಲೆ ಗುಂಪು ಮಾಡುವುದನ್ನು ಬಿಡಬೇಕು ಎಂದವರು ಹೇಳಿದ್ದಾರೆ.