ಬೆಂಗಳೂರು: ʼನಮ್ಮ ಮೆಟ್ರೋʼ ಹಸಿರು ಮಾರ್ಗದಲ್ಲಿ ಸಂಚರಿಸಿದ್ದ ರೀ ರೈಲ್‌ ವಾಹನ ಆಯತಪ್ಪಿದ ಹಿನ್ನಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಸತತ ಕಾರ್ಯಾಚರಣೆ ಬಳಿಕ ಇದೀಗ ರೀ ರೈಲು ವಾಹನವನ್ನು ಸ್ಥಳದಿಂದ ತೆರವು ಮಾಡಲಾಯಿತು.ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ರಾಜಾಜಿನಗರದ ಮೆಟ್ರೊ‌ ನಿಲ್ದಾಣದ ಸಮೀಪ‌ ಹಳಿ ತಪ್ಪಿದ ಪರಿಣಾಮ, ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಸಕಾಲಕ್ಕೆ ನಿಗದಿತ ಸ್ಥಳ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡಿದ್ದರು. ಇದೀಗ ಕ್ರೇನ್​ ಮೂಲಕ ಸಿಬ್ಬಂದಿ ರೀ ರೈಲನ್ನು ತೆರವುಗೊಳಿಸಿ ರಸ್ತೆಗಿಳಿಸಿದರು.ಸಂಚಾರ ಆರಂಭʼʼಇನ್ನು ಹಸಿರು ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಿದೆ. ವಾಹನ ಹಳಿ ತಪ್ಪಿದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮೆಟ್ರೊ ರೈಲುಗಳು ಸುಗಮವಾಗಿ ಸಂಚರಿಸುತ್ತಿವೆʼʼ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.    