ಬೆಂಗಳೂರು : ವಿಧಾನ ಸೌಧದ ಗಾಂಧಿ ಪ್ರತಿಮೆಯ ಬಳಿ ಅಹಿಂಸಾ ದೀಪವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಜಂಟಿಯಾಗಿ ರವಿವಾರ ಉದ್ಘಾಟಿಸಿದರು.ಮಹಾತ್ಮ ಗಾಂಧೀಜಿ ರವರ ಜನ್ಮ ದಿನದ ಪ್ರಯುಕ್ತ ಫಿಲಿಪ್ಸ್ ಲೈಟ್ಸ್ ನವರು ತಯಾರಿಸಿರುವ ವಿಶಿಷ್ಟ ತಂತ್ರಜ್ಞಾನದ ಅಹಿಂಸಾ ದೀಪವನ್ನು ಪ್ರಾಯೋಗಿಕವಾಗಿ ಬೆಂಗಳೂರು ವಿಧಾನ ಸೌಧದ ಗಾಂಧಿ ಪ್ರತಿಮೆಯ ಬಳಿ ಅಳವಡಿಸಲಾಗಿದೆ. ಯುರೋಪ್ ಹಾಗೂ ಆಫ್ರಿಕಾದ ವಿವಿಧ ದೇಶದಲ್ಲಿ ನಡೆಯುವ ಕಾಮನ್ ವೆಲ್ತ್ ಪಾರ್ಲಿಮೆಂಟ್ ಸಮಾವೇಶದಲ್ಲಿ ಕರ್ನಾಟಕ  ರಾಜ್ಯದ ಪ್ರತಿನಿಧಿಗಳಾಗಿ ಯು ಟಿ ಖಾದರ್ ಹಾಗೂ ಬಸವರಾಜ ಹೊರಟ್ಟಿ ರವರು ರವಿವಾರ ರಾತ್ರಿ ತೆರಳಲಿದ್ದು, ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.  