ಬೆಂಗಳೂರು: ‘ಬ್ಯಾರೀಸ್ ಸೌಹಾರ್ದ ಭವನ’ ಕಟ್ಟಡದಲ್ಲಿನ ಹೆಣ್ಣು ಮಕ್ಕಳ ಹಾಸ್ಟೆಲ್ ಅನ್ನು ಮಾಜಿ ಸಚಿವ ದಿವಂಗತ ಬಿ.ಎ. ಮೊಹಿದಿನ್ ಅವರ ಪತ್ನಿ ಖತೀಜಾ ಬಿ.ಎ. ಮೊಹಿದಿನ್ ಉದ್ಘಾಟಿಸಿದರು.ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ನ ಎದುರುಗಡೆ ನಿರ್ಮಿಸಲ್ಪಟ್ಟ ‘ಬ್ಯಾರೀಸ್ ಸೌಹಾರ್ದ ಭವನ’ ಮತ್ತು ಮಾಜಿ ಸಚಿವ ಬಿ.ಎ. ಮೊಹಿದಿನ್ ಸ್ಮಾರಕ ಆಡಿಟೋರಿಯಂ ಅನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ಇದೇ ಸಂದರ್ಭದಲ್ಲಿ ಆ ಕಟ್ಟಡದಲ್ಲಿರುವ  ಹೆಣ್ಣು ಮಕ್ಕಳ ಹಾಸ್ಟೆಲ್ ಖತೀಜಾ ಬಿ.ಎ. ಮೊಹಿದಿನ್ ಉದ್ಘಾಟಿಸಿದ್ದಾರೆ.  ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕ್ರಮವಾಗಿ ಆಡಿಟೋರಿಯಂ ಮತ್ತು ಮಹಿಳಾ ಸಭಾಂಗಣವನ್ನು ಉದ್ಘಾಟಿಸಿದರು.ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಫಾರೂಕ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂಧನ ಖಾತೆಯ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಕಟ್ಟಡ ಸಮಿತಿ ಸದಸ್ಯ ಉಮರ್ ಟೀಕೆ ಮತ್ತಿತರರು ಪಾಲ್ಗೊಂಡಿದ್ದರು. 