ಸಾಂದರ್ಭಿಕ ಚಿತ್ರಮೈಸೂರು,ಅ.1: ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದ ಪುತ್ರಿಯನ್ನು ರಕ್ಷಣೆ ಮಾಡಲು ಹೋದ ಅಪ್ಪ-ಅಮ್ಮನೂ ಸಹ ಸಾವನ್ನಪ್ಪಿದ  ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ  ತಾಲ್ಲೂಕಿನ ಚಂಗೌಡನಹಳ್ಳಿ ಬಳಿ ಜರುಗಿದೆ.ಮೃತಪಟ್ಟವರನ್ನು ಬೆಂಗಳೂರಿನ‌ ಜಯನಗರದ ನಿವಾಸಿಗಳಾದ ಶಾಹಿರ ಬಾನು (20) ತಂದೆ ಮುಹಮ್ಮದ್ ಕಫೀಲ್ (42) ತಾಯಿ ಶಾವರ ಬಾನು (35) ಎಂದು ಗುರುತಿಸಲಾಗಿದೆ.ಕೈ-ಕಾಲು ತೊಳೆದುಕೊಂಡು ಬರಲು ನುಗು ಜಲಾಶಯದ ಬಲದಂಡೆ ಕಾಲುವೆಗೆ ಹೋದ ಮಗಳು ಕಾಲು ಜಾರಿ ಬಿದ್ದಿದ್ದಾಳೆ. ಅವಳನ್ನು ರಕ್ಷಣೆ ಮಾಡಲು ಹೋದ ಅಪ್ಪ-ಅಮ್ಮ ಕೂಡ ನೀರಿನಲ್ಲಿ ಮುಳುಗಿದ್ದಾರೆಎಂದು ತಿಳಿದು ಬಂದಿದೆ.ಈ ಸಂಬಂಧ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.