ಬೆಂಗಳೂರು: ರಾಜ್ಯ ಸರಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಪ್ರಬಲ ಜಾತಿಯವರೇ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಂಡಿದ್ದಾರೆ.ಈ ಬಗ್ಗೆ ʼʼಪ್ರಜಾವಾಣಿʼʼಯಲ್ಲಿ ಚಂದ್ರಹಾಸ ಹಿರೇಮಳಲಿ  ಅವರು ವಿಶೇಷ ವರದಿ ಮಾಡಿದ್ದು, ರಾಜ್ಯದ 41 ವಿಶ್ವವಿದ್ಯಾಲಯಗಳ ಕುಲಪತಿಗಳ ಜಾತಿವಾರು ವಿವರಗಳನ್ನು ಒಳಗೊಂಡ ದಾಖಲೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣ/ಸಾಮಾನ್ಯ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿ ಅವಕಾಶ ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಒಬಿಸಿ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಮುಸ್ಲಿಂ ಸೇರಿದಂತೆ ತಳ ಸಮುದಾಯಗಳಿಗೆ ಕುಲಪತಿಗಳ ನೇಮಕಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆಯೂ ಇದೆ.ಹಾಗಾಗಿ, ಅವಕಾಶ ವಂಚಿತ ಸಮುದಾಯದ ಪ್ರಾಧ್ಯಾಪಕರಿಗೆ ಮುಂದಿನ ನೇಮಕಾತಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ʼʼಅಧಿಕಾರಕ್ಕೆ ಬರುವ ಸರ್ಕಾರಗಳು ಸಾಮಾಜಿಕ ನ್ಯಾಯದ ಬಗ್ಗೆ ಚಿಂತಿಸುವುದೇ ಇಲ್ಲ. ತಮ್ಮ ಜಾತಿ, ಸಿದ್ಧಾಂತಗಳಿಗೆ ಸರಿ ಹೊಂದುವಂತಹ ಕುಲಪತಿಗಳನ್ನೇ ಆಯ್ಕೆ ಮಾಡುತ್ತಾರೆ. ಅದಕ್ಕಾಗಿ ಶೋಧನಾ ಸಮಿತಿಗೂ ತಮಗೆ ಬೇಕಾದವರನ್ನೇ ನೇಮಿಸುತ್ತಾರೆ. ಶೋಧನಾ ಸಮಿತಿ ಶಿಫಾರಸು ಮಾಡಿದ ಮೂವರಲ್ಲೂ ತಮಗೆ ಬೇಕಾದವರನ್ನೇ ನೇಮಿಸಲು ರಾಜ್ಯಪಾಲರಿಗೆ ಮುಖ್ಯಮಂತ್ರಿ ಶಿಫಾರಸು ಮಾಡುತ್ತಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಾಗೂ 2020ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲೂ ಮುಖ್ಯಮಂತ್ರಿ ಜತೆ ಚರ್ಚಿಸಿಯೇ ರಾಜ್ಯಪಾಲರು ಕುಲಪತಿಗಳ ಆಯ್ಕೆ ಅಂತಿಮಗೊಳಿಸಬೇಕು ಎನ್ನುವ ನಿಯಮವಿದೆ. ನಿಯಮ ಬಳಸಿಕೊಳ್ಳುವ ಮುಖ್ಯಮಂತ್ರಿ ತಮ್ಮ ಜಾತಿಗಳ ಪ್ರಾಧ್ಯಾಪಕರ ಹೆಸರುಗಳನ್ನು ಶಿಫಾರಸು ಮಾಡುತ್ತಾ ಬಂದಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ಅಧಿಕಾರ ನಡೆಸಿದ ಮುಖ್ಯಮಂತ್ರಿಯಾದ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುತ್ತಿದ್ದಾರೆʼ-  ಪಿ.ವಿ.ವೆಂಕಟರಾಮಯ್ಯ- ವಿಶ್ರಾಂತ ಕುಲಪತಿʼʼಕುಲಪತಿಗಳ ನೇಮಕಾತಿಯಲ್ಲಿ ಜಾತಿ ಹಾಗೂ ಹಣವೇ ಪ್ರಧಾನವಾಗಿದೆ. ಉಳಿದದ್ದೆಲ್ಲವೂ ಗೌಣವಾಗಿದೆ. ಇದರಿಂದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ತಮ್ಮ ಘನತೆ ಕಳೆದುಕೊಳ್ಳುತ್ತಿವೆʼʼ ಎಂದು ವಿಶ್ವವಿದ್ಯಾಲಯಗಳ ಪ್ರತಿಭಾವಂತ ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.ಮುಸ್ಲಿಮ್, ಕ್ರಿಶ್ಚಿಯನ್ನರಿಗಿಲ್ಲ ಒಂದೂ ಸ್ಥಾನರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ‌ಸದ್ಯ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್‌ ಸಮುದಾಯದ ಒಬ್ಬರಿಗೂ ಕುಲಪತಿ ಸ್ಥಾನ ದೊರೆತಿಲ್ಲ. ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಒಂದು ಸ್ಥಾನವನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ಮುಸ್ಲಿಮ್ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ‌ ಎಂದು ಹೇಳಲಾಗಿದೆ. ಜಾತಿ; ಕುಲಪತಿಗಳ ಸಂಖ್ಯೆಲಿಂಗಾಯತ: 11ಒಕ್ಕಲಿಗ: 07ಸಾಮಾನ್ಯ/ಬ್ರಾಹ್ಮಣ: 07ಪರಿಶಿಷ್ಟ ಜಾತಿ: 05ಪರಿಶಿಷ್ಟ ಪಂಗಡ: 01ಹಿಂದುಳಿದ ವರ್ಗಗಳು: 06ಖಾಲಿ ಇರುವ ಸ್ಥಾನಗಳು: 04ಒಟ್ಟು- 41