ಮೈಸೂರು,ಸೆ.28: ರಸ್ತೆ ದಾಟುತ್ತಿದ್ದ ವೇಳೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮಂಡಕಳ್ಳಿ ಬಳಿ ವರದಿಯಾಗಿದೆ.ಮೃತ ಮಹಿಳೆಯನ್ನು ಉದ್ಬೂರು ಗ್ರಾಮದ ನಿವಾಸಿ ಸಣ್ಣಮ್ಮ (60) ವರ್ಷ ಎಂದು ಗುರುತಿಸಲಾಗಿದೆ. ಈಕೆ ಮೈಸೂರಿನಿಂದ  ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಬಂದು  ಮಂಡಕಳ್ಳಿ ಗ್ರಾಮದ  ಬಳಿ ಇಳಿದು ರಸ್ತೆ ದಾಟುತ್ತಿದ್ದಾಗ  ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  ಢಿಕ್ಕಿ ಹೊಡೆದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು. ಮೃತ ಮಹಿಳೆಯ ಮೃತ ದೇಹವನ್ನು ಶವಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.