ಜಿಲ್ಲಾಧಿಕಾರಿ ಧಾರವಾಡ, ಸೆ.26: ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸೆ.29 ಕ್ಕೆ ಆಚರಿಸುತ್ತಿರುವದರಿಂದ  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸೆ.28 ರಂದು ಇರುವ ಸರ್ಕಾರಿ ರಜೆಯನ್ನು ಸೆ.29ಕ್ಕೆ ಮುಂದೂಡಲಾಗಿದೆ. ಈ ಸಂಬಂಧ ಸೆ.29 ಕ್ಕೆ ರಜೆ ಘೋಷಿಸಿ, ಜಿಲ್ಲಾದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು  ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.