ಬೆಂಗಳೂರು, ಸೆ.26: ಕಾವೇರಿ ನೀರು ವಿಚಾರವಾಗಿ ಬೆಂಗಳೂರು ಬಂದ್ ಘೋಷಿಸಿದ್ದರೂ, ಹೋಟೆಲ್‌ನ ಬಾಗಿಲು ತೆರೆದಿದೆ ಎಂದು ಪ್ರತಿಭಟನೆಯ ಹೆಸರಿನಲ್ಲಿ ದುಷ್ಕರ್ಮಿಗಳು ಜಯನಗರದಲ್ಲಿರುವ ಉಡುಪಿ ಹಬ್‌ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ವರದಿಯಾಗಿದೆ.ಶಿವು, ವಿಶ್ವ ಹಾಗೂ ಇತರೆ ದುಷ್ಕರ್ಮಿಗಳ ಗುಂಪು ಈ ಕೃತ್ಯ ನಡೆಸಿದ್ದು, ಈ ಕುರಿತು ಹೋಟೆಲ್ ಮಾಲಕ ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡ ಜಯನಗರ ಠಾಣೆಯ ಪೊಲೀಸರು, ಆರೋಪಿ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ವೇಳೆ ಇವರು ಜಯನಗರ ಶಾಸಕ ರಾಮಮೂರ್ತಿ ಬೆಂಬಲಿಗರು ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  