ಚಿಕ್ಕಮಗಳೂರು, ಸೆ.24: ಗಣೇಶೋತ್ಸವದ ಗಣಪತಿ ವಿಸರ್ಜನೆ ವೇಳೆ ಯುವಕನೋರ್ವ ಕೆರೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ಗಣೇಶ್ (25) ಎಂದು ಗುರುತಿಸಲಾಗಿದೆ.  ಕುರುಬರಹಳ್ಳಿ ಕೆರೆಯಲ್ಲಿ ಕಳೆದ ರಾತ್ರಿ ಗಣಪತಿ ವಿಸರ್ಜನೆ ವೇಳೆ ಈ ದುರ್ಘಟನೆ ಸಂಭವಿಸಿದೆ.  ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  