ಮೈಸೂರು,ಸೆ.22: ಕೆಎಸ್‌ಒಯು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಂದು ದಿನ ಮೊದಲೇ ವಾಟ್ಸ್ ಆ್ಯಪ್ ಮೂಲಕ ಮಾರಾಟವಾಗಿರುವ ಕುರಿತು ಮಾಹಿತಿ ಬೆಳಕಿಗೆ ಬಂದಿದೆ.ಕೆಎಸ್‌ಒಯು ಮಂಗಳೂರು ಕೇಂದ್ರದ ಸಿಬ್ಬಂದಿಯಿಂದಲೇ ಪ್ರಶ್ನೆ ಪತ್ರಿಕೆ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.  ಓರ್ವ ವಿದ್ಯಾರ್ಥಿ ಈ ಬಗ್ಗೆ ಪರಿಶೀಲನೆ ನಡೆಸಲು ಹಣ ನೀಡಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡಿದ್ದು, ಪರೀಕ್ಷೆಗೆ ನೀಡಿದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿದೆ. 2,000 ರೂಪಾಯಿಗೆ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಲಾಗಿದೆ  ಎಂದು ಆರೋಪಿಸಿ ಚಂದು.ಎಚ್. ಎಸ್. ಎಂಬ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದು, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.