ಮೈಸೂರು,ಸೆ.19:  ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆ ಬಳಿಯ ಕಾಲುವೆಯೊಂದರಲ್ಲಿ ಅನಮಾನಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯ  ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ಸ್ಥಳಕ್ಕೆ ಚುಂಚನಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರಾ? ಆತ್ಮಹತ್ಯೆಯಾ? ಕೊಲೆಯಾ? ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.