ಬೆಳಗಾವಿ: ತಾಲೂಕಿನ ಹಲಗಾ ಬಳಿ ಸಾರಿಗೆ ಬಸ್‌ವೊಂದು ಪಲ್ಟಿಯಾಗಿ ಚಾಲಕ, ನಿರ್ವಾಹಕಿ ಸೇರಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಶನಿವಾರ ವರದಿಯಾಗಿದೆ. ಸುವರ್ಣ ವಿಧಾನಸೌಧದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ  ಬಸ್‌ ಬಿದ್ದಿದೆ. ಈ ಬಸ್ ನಗರ ಬಸ್ ನಿಲ್ದಾಣದಿಂದ ಕೆ.ಕೆ.ಕೊಪ್ಪಕ್ಕೆ ಹೊರಟಿತ್ತು ಎಂದು ತಿಳಿದು ಬಂದಿದೆ.ತಕ್ಷಣ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಆರೋಗ್ಯ ವಿಚಾರಿಸಿದ ಲಕ್ಷ್ಮೀ ಹೆಬ್ಬಾಳ್ಕರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಎಲ್ಲರಿಗೂ ಧೈರ್ಯವನ್ನು ತುಂಬಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆಯನ್ನು ನೀದ್ದಾರೆ.   