ಎಚ್.ಎಂ. ವೆಂಕಟೇಶ್‌ಬೆಂಗಳೂರು: ಕರ್ನಾಟಕ ಭೂಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಂದಲೇ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆಗಿರುವುದರಿಂದ ಅವರನ್ನು ತಕ್ಷಣ ವಜಾ ಗೊಳಿಸುವಂತೆ ʼನೈಜ ಹೋರಾಟಗಾರ ವೇದಿಕೆʼಯು ಸರಕಾರವನ್ನು ಒತ್ತಾಯಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ʼನೈಜ ಹೋರಾಟಗಾರ ವೇದಿಕೆʼಯ ಎಚ್.ಎಂ. ವೆಂಕಟೇಶ್‌, ʼʼಕರ್ನಾಟಕ ಸರ್ಕಾರದ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಿಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರಾದ ಪಾಟೀಲ್ ನಾಗಲಿಂಗನಗೌಡ ತಮ್ಮ ಖಾಸಗಿ ಕಾರಿಗೆ ಸರಕಾರದ ಲಾಂಛನವನ್ನು ಮತ್ತು ʼಕರ್ನಾಟಕ ಸರ್ಕಾರʼ ಎಂಬ ನಾಮಫಲಕವನ್ನು ಅಳವಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಲಾಂಛನ ಮತ್ತು ಸರ್ಕಾರದ ನಾಮಫಲಕವನ್ನೇ ದುರುಪಯೋಗಪಡಿಸಿಕೊಂಡಿರುವ ಇವರನ್ನು ಭೂಕಬಳಿ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯತ್ವದಿಂದ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. 