ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಇಲ್ಲಿನ ಸೇಡಂ ತಾಲೂಕಿನ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.  ಸೇಡಂ ಪಟ್ಟಣದ ಎಸಿ ಕಚೇರಿಯ ಹತ್ತಿರದ ಸೇಡಂ ಪೊಲೀಸ್ ಠಾಣೆ ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಈ ಅವಘಡಕ್ಕೆ ಸಾಕ್ಷಿಯಾಗಿದೆ. ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಗೆ ಸೋಮವಾರ ಪೋಲಿಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿದ್ದು. ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಯಿಂದ ಪೋಲಿಸ್ ಸಿಬ್ಬಂದಿಗಳು ಇಡಿ ರಾತ್ರಿ ಪೋಲಿಸ್ ಠಾಣೆಯಲ್ಲಿ ಜಾಗರಣೆ ಮಾಡಿ. ದಾಖಲಾತಿಗಳನ್ನು ಟೇಬಲ್​ ಮೇಲೆ ಇಟ್ಟು ಹಾಳಾಗದಂತೆ ಸಿಬ್ಬಂದಿಗಳು ಎಚ್ಚರವಹಿಸಿದ್ದಾರೆ.ಮಳೆ ನೀರು ಹರಿದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆ ಉಂಟಾಗಿದ್ದು, ಇದೀಗ ನೀರನ್ನು ಹೊರಹಾಕಲು ಪೊಲೀಸರು ಪರದಾಡುತ್ತಿದ್ದಾರೆ. 