ಹಾಸನ: ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಅನರ್ಹಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರನ್ನು ಕೇಳಿ ಮುಂದುವರಿಯುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ತೀರ್ಪಿನ ಕಾಪಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ. ಆದೇಶದ ಪ್ರತಿ ಬರಲಿ ಎಂದರು. ನನಗೆ ಯಾವ ಸೂಚನೆಯೂ ಬಂದಿಲ್ಲ. ಕಾನೂನಿಗೆ ನಾವೆಲ್ಲ ತಲೆ ಬಾಗಬೇಕು. ಆ ರೀತಿ ನಾವು ಇದ್ದೇವೆ. ಮುಂದೆ ಏನು ಮಾಡಬೇಕೆಂದು ವಕೀಲರನ್ನು ಕೇಳಿ ಮಾಡುತ್ತೇವೆ ಎಂದು ಹೇಳಿದರು.