ಮೈಸೂರು,ಸೆ.1:  ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಟಾನ(ರಿ) ಉಜಿರೆ, ಮೈಸೂರು ಮಹಾನಗರದ ಕಲಾ ಪೋಷಕರ ಸಹಕಾರದೊಂದಿಗೆ ಮೈಸೂರಿನಲ್ಲಿ ಸೆಪ್ಟಂಬರ್ 2 ರಿಂದ 4 ರವರೆಗೆ ರಜತಪರ್ವ ಸರಣಿ-ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.ಸೆಪ್ಟಂಬರ್ 2 ರ ಶನಿವಾರ ವೆಂಕಟಚಲಾ ಧಾಮ, ರಾಮಸ್ವಾಮಿ ಸರ್ಕಲ್ (ಕೃಷ್ಣಬೇಕರಿ) ಎದರು  ಸಂಜೆ 5 ಗಂಟೆಗೆ ವಾಮನ ಚರಿತ್ರೆ, ಸೆ.3 ರ ರವಿವಾರ ಕುವೆಂಪುನಗರದ ಲವಕುಶ ಪಾರ್ಕ್ ಎದುರಿನ  ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ  ಸಂಘ (ರಿ)  ಸಂಜೆ 5 ಗಂಟೆಗೆ ವಾಲಿ ವಧೆ, ಸೆ.4 ರ ಸೋಮವಾರ ಉತ್ತರ ಕನ್ನಡ ಜಿಲ್ಲಾ ಸಾಂಸ್ಕøತಿಕ ಸಂಘ(ರಿ) ಯಲ್ಲಿ ವೀರಮಣಿ ಕಾಳಗ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.  