ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಗಜಪಯಣಕ್ಕೆ ಶುಕ್ರವಾರ ಜಿಲ್ಲೆಯ  ವೀರನಹೊಸಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ‌ಎಚ್.ಸಿ.ಮಹದೇವಪ್ಪ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಅರ್ಜುನ, ಗೋಪಿ, ಧನಂಜಯ, ವರಲಕ್ಷ್ಮಿ, ವಿಜಯ, ಮಹೇಂದ್ರ ಮತ್ತು ಕಂಚನ್ ಎಂಬ ಆನೆಗಳಿಗೆ ಅರಮನೆ ಪುರೋಹಿತರು ಪೂಜೆ ಸಲ್ಲಿಸಿದರು.  ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೊದಲ‌ತಂಡದ ಗಜಪಡೆಗಳಿಗೆ ಪುಷ್ಪಾರ್ಚನೆ ಮಾಡಿದರು.ಗಜಪಯಣ ಹಿನ್ನಲೆಯಲ್ಲಿ ಇಡೀ ವೀರನಹೊಸಹಳ್ಳಿಯನ್ನು ತಳಿತು ತೋರಣಗಳಿಂದ ಸಿಂಗರಿಸಲಾಗಿದೆ.  ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜಿ.ಡಿ‌ಹರೀಶ್ ಗೌಡ, ಮೈಸೂರು ಮೇಯರ್ ಶಿವಕುಮಾರ್, ಡಿಸಿಎಫ್, ಹರ್ಷ ನರಗುಂದ, ಆರ್.ಎಫ್.ಓ ಸಂತೋಷ್, ಆರ್.ಎಫ್ ಚಂದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  