ಹುಬ್ಬಳ್ಳಿ:  ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.ಇದರ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸರ ಟ್ವೀಟ್‌ ಒಂದು ವೈರಲ್‌ ಆಗಿದೆ. ಇಸ್ರೋ ವಿಜ್ಞಾನಿಗಳು ವಿಕ್ರಮ್​ ಲ್ಯಾಂಡರ್​ನ್ನು ಚಂದ್ರನ ಮೇಲೆ ಲ್ಯಾಂಡ್​ ಮಾಡಿಸಿದರೆ, ಇತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬೈಕ್​ನ ಚಕ್ರವನ್ನು ಮೇಲೆತ್ತಿ ವೀಲಿಂಗ್​ ಮಾಡುತ್ತಿದ್ದವನನ್ನು ಹಿಡಿದು ನೆಲಕ್ಕೆ ಲ್ಯಾಂಡ್​ ಮಾಡಿಸಿದ ಘಟನೆಯನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ವಿಭಿನ್ನವಾಗಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.ಟ್ವೀಟ್‌ ನಲ್ಲೇನಿದೆ? ʼʼಆವತ್ತು ಎರಡು ಘಟನೆಗಳು ನಡೆದವು..1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್  ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'.. 2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..ʼʼ ಎಂದು ವೀಲಿಂಗ್​ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿರುವ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವಿಭಿನ್ನವಾಗಿ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.  