ಬೆಂಗಳೂರು: ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ  ನಡೆಯಲಿರುವ   ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಸಮಾವೇಶದ ಪ್ರಚಾರಾರ್ಥವಾಗಿ ಜಿ-ಟೀಮ್ ಕಾರ್ಯಕರ್ತರ ಕಾಲ್ನಡಿಗೆ ಜಾಥ  ಆರ್.ಟಿ ನಗರದಲ್ಲಿ ನಡೆಯಿತು.ಪ್ರತೀ ಶಾಖೆಗಳಿಂದ ಆಯ್ದ ಜಿ-ಟೀಂ ಸದಸ್ಯರು ಸಮವಸ್ತ್ರಧಾರಿಗಳಾಗಿ ಭಾಗವಹಿಸಿ ಜಾಥಕ್ಕೆ ಮೆರುಗು ನೀಡಿದರು.ಇದಕ್ಕೆ ಮುಂಚೆ ನಡೆದ ಜಿ-ಟೀಂ ಅಸೆಂಬ್ಲಿಗೆ ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಫಾರೂಕ್ ಅಮಾನಿ ನೇತೃತ್ವ ನೀಡಿದರು. ಜಿಲ್ಲಾಧ್ಯಕ್ಷರಾದ ಅಬ್ದುಲ್ ಲತೀಫ್ ನಯೀಮಿ  ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಪ್ರ.ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು,ಜಿಲ್ಲಾ ಪ್ರ.ಕಾರ್ಯದರ್ಶಿ ಶಬೀಬ್ ಕಾಲಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಶಿಹಾಬ್ ಮಡಿವಾಳ ,ಅಕ್ತರ್  ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಅಲ್ತಾಫ್ ಅಲಿ ಸ್ವಾಗತಿಸಿ ಸಿನಾನ್  ವಂದಿಸಿದರು.    