ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ-ಮಗು ಸಾವು ಪ್ರಕರಣ; ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಿಸುವಂತೆ ಕುಟುಂಬಸ್ಥರಿಗೆ ಸಿಎಂಗೆ ಮನವಿ  ಬೆಂಗಳೂರು: ಅಮೆರಿಕದಲ್ಲಿ ಎರಡು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು ಇವರ ಸಂಬಂಧಿಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಸಿಎಂ ಭೇಟಿ ವೇಳೆ ಮೃತರ ಕುಟುಂಬಸ್ಥರು ಮೃತ ದೇಹಗಳನ್ನು ಸ್ವಗ್ರಾಮಕ್ಕೆ ತರಿಸುವುದು ಸೇರಿದಂತೆ ಹಲವು ತಾಂತ್ರಿಕ ನೆರವು ಕೋರಿದರು. ಈ ವೇಳೆ ಕುಟುಂಬಸ ಸದಸ್ಯರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಗತ್ಯ ನೆರವು ಒದಗಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸೂಚಿಸಿದರು.  