ಬೆಂಗಳೂರು: ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ, ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ. ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ ಬಿ ಎಸ್ ಯಡಿಯೂರಪ್ಪ ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.  ಈ ಬಗ್ಗೆ ಟ್ವೀಟ್ ಮಾಡಿರುವ  ಕಾಂಗ್ರೆಸ್, ಅಸಮಾಧಾನಿತರ ನೋವು ಕೇಳಲು ನಳಿನ್ ಕುಮಾರ್ ಕಟೀಲ್ ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ. ರಾಜ್ಯದ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ, ತಿರಸ್ಕಾರ ಇರುವುದೇಕೆ? ಬಹುಶಃ ಅಮಿತ್ ಶಾ ಅವರಿಗೆ ಕರ್ನಾಟಕದ ಬಿಜೆಪಿ ಘಟಕವನ್ನು ವಿಸರ್ಜಿಸಿಬಿಡುವ ಚಿಂತನೆ ಇರಬಹುದೇನೋ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ,ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ.ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ BSY ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.ಅಸಮಾದಾನಿತರ ನೋವು ಕೇಳಲು @nalinkateel ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ @BJP4Karnataka?… pic.twitter.com/S97Yaknkt5 