ಚಿಕ್ಕಬಳ್ಳಾಪುರ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣೆ ವೇದಿಕೆ ಮುಖಂಡನೋರ್ವನನ್ನು ಇಲ್ಲಿನ ಗೌರಿಬಿದನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆ ಮೂಲದ ಸತೀಶ್ ಬಂಧಿತ‌ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯು ಹಿಂದೂ ಜಾಗರಣೆ ವೇದಿಕೆ ಕರ್ನಾಟಕ ದಕ್ಷಿಣ ಸಂಚಾಲಕನಾಗಿದ್ದು, ಆಗಸ್ಟ್‌ 14ರಂದು​​ ಪ್ರಚೋದನಕಾರಿ ಬಾಷಣ ಮಾಡಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಗೌರಿಬಿದನೂರು ನಗರ ಠಾಣೆಯ ಪೊಲೀಸರು ಬಂಧಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್.ನಾಗೇಶ್ ಮಾಹಿತಿ ನೀಡಿದರು. 