ಧನಂಜಯ-  ಬಂಧಿತ ಅಧಿಕಾರಿಬೆಂಗಳೂರು, ಆ.17: ಬೆಸ್ಕಾಂ ಜಯನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ಎಂಬುವರು 3.5 ಲಕ್ಷ ರೂ. ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.ವಿದ್ಯುತ್ ಗುತ್ತಿಗೆದಾರರಾದ ಭರತ್ ಕುಮಾರ್ ಎನ್.ಎಂ, ಶಂಕರ್ ಮತ್ತು ಗುರುದತ್ ಅವರು ನೀಡಿದ ದೂರನ್ನು ಆಧರಿಸಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಖಾಸಗಿ ನಿವಾಸವೊಂದಕ್ಕೆ ಜಯನಗರ 8ನೇ ಬ್ಲಾಕ್‍ನಲ್ಲಿ 22 ಕೆವಿ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ 13 ಲಕ್ಷ ರೂ. ಲಂಚದ ಮೊತ್ತ ಬೇಡಿಕೆ ಇಟ್ಟಿದ್ದ ಆರೋಪಿ ಧನಂಜಯ ಅವರು 3.5 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.   ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 