ಪೂಂಚ್: ಯುವ ಸಮೂಹದ ನಡುವೆ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನ ದೇಶದ ಪ್ರಗತಿಗೆ ಮಾರಕವೆಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಡಾ. ಮುಹಮ್ಮದ್ ಫಾರೂಖ್ ನ‌ಈಮಿ ಅಭಿಪ್ರಾಯಪಟ್ಟಿದ್ದಾರೆ.ಮಾದಕ ಪದಾರ್ಥಗಳ ಸೇವನೆಯನ್ನು ತಡೆಯಲು ಕಠಿಣ ನಿಯಮಗಳನ್ನು ರೂಪಿಸಬೇಕು ಎಂದ ಅವರು ಪೂಂಚ್‌ನಲ್ಲಿ ನಡೆದ ಎಸ್ಸೆಸ್ಸೆಫ್ಫಿನ ಸಂವಿಧಾನ ಯಾತ್ರೆಯ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯುತ್ತಿರುವ ಸಂವಿಧಾನ ಯಾತ್ರೆಯ ಧ್ವಜಾರೋಹಣವನ್ನು ಆ.12ರಂದು ಶ್ರೀನಗರದ ಹಝ್ರತ್ ಬಾಲ್ ಮಸೀದಿಯಲ್ಲಿ ಇಮಾಮ್ ಹಝ್ರತ್ ಬಿಲಾಲ್ ಅಹ್ಮದ್ ಖಾದ್ರಿ ನೆರವೇರಿಸಿದರು. ಶ್ರೀನಗರದಿಂದ ಹೊರಟು, ಪೀರ್‌ಗಲ್ಲಿಯಲ್ಲಿ ಸ್ವಾಗತ ಕಾರ್ಯಕ್ರಮ ಜರುಗಿ, ಪೂಂಚ್ ತಲುಪಿದ ಯಾತ್ರಾ ಗುಂಪಿಗೆ ಗೋಲ್ಡನ್ ಬ್ರಿಗೇಡ್ ಸದಸ್ಯರು ಸ್ವಾಗತಿಸಿದರು.