ಬಂಧಿತ ಆರೋಪಿಗಳು  ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಸೇರಿ ಪತ್ನಿ ಪತಿಯನ್ನು ಹತ್ಯೆಗೈದಿರುವ ಘಟನೆ  ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ಸೋಮವಾರ ವರದಿಯಾಗಿದೆ. ನವೀನ್ (28)  ಕೊಲೆಗೀಡಾದ ವ್ಯಂಕ್ತಿಯಾಗಿದ್ದು, ಪತ್ನಿ ಪಾವನ ಹಾಗೂ ಆಕೆಯ ಪ್ರಿಯಕರ ಸಂಜಯ್‌ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದ ಪಾವನ ಪ್ರಜ್ಞೆ ತಪ್ಪಿದ ಬಳಿಕ ಪತಿಯನ್ನ ಸಂಜಯ್‌ ಜೊತೆ ಬೈಕಲ್ಲಿ ತಂದು ಕೆರೆಗೆ ಎಸೆದಿದ್ದಾರೆನ್ನಲಾಗಿದೆ. ಮೃತದೇಹ ಪತ್ತೆ; ನವೀನ್ ಪೋಷಕರಿಂದ ದೂರು ನವೀನ್‌ ಅವರ ಮೃತದೇಹ ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ಯಗಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನವೀನ್‌ ಪೋಷಕರ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಪತಿಯನ್ನು ಕೊಂದಿರುವುದಾಗಿ ತನಿಖೆಯಲ್ಲಿ ಪಾವನ ಹಾಗೂ ಸಂಜಯ್ ಬಾಯ್ಬಿಟ್ಟಿದ್ದಾರೆನ್ನಲಾಗಿದೆ.