ಬೆಂಗಳೂರು, ಆ.9: ಮಂಜುನಾಥ ಚೌದರಿ ಎಂ.ಎಚ್. ಅವರು ಸೇರಿ ಮೂವರು ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.ಮಂಜುನಾಥ ಚೌದರಿ ಎಂ.ಎಚ್. ಅವರನ್ನು ಸಿಸಿಬಿ ಬೆಂಗಳೂರು ನಗರಕ್ಕೆ ನಿಯೋಜಿಸಲಾಗಿದೆ. ರಂಗಪ್ಪ ಟಿ. ಅವರನ್ನು ಬೆಂಗಳೂರು ನಗರದ ಸಂಪಿಗೆಹಳ್ಳಿ ಉಪವಿಭಾಗದಲ್ಲಿಯೇ ಮುಂದುವರೆಸಲಾಗಿದೆ. ರವಿ ಪಿ. ಅವರನ್ನು ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ವರ್ಗಾವಣೆಗೊಳಿಸಿ ಆದೇಶದಲ್ಲಿ ತಿಳಿಸಲಾಗಿದೆ.  40 ಇನ್ಸ್‍ಪೆಕ್ಟರ್‍ಗಳ ವರ್ಗಾವಣೆ: ಹನುಮಂತರಾಜ್ ಎಂ. ಸೇರಿದಂತೆ 40 ಪೊಲೀಸ್ ಇನ್ಸ್‍ಪೆಕ್ಟರ್ (ಸಿವಿಲ್)ಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಹನುಮಂತರಾಜ್ ಎಂ. ಅವರನ್ನು ಬಾಗಲಕೋಟೆ ಪೊಲೀಸ್ ಠಾಣೆ, ಪ್ರೀತಮ್ ಎ.ಡಿ. ಅವರನ್ನು ಬೊಮ್ಮನಹಳ್ಳಿ ಪೊಲೀಸ್ ಠಾಣೆ, ಸಂದೀಪ್ ಎಚ್ ಅವರನ್ನು ಬೆಂಗಳೂರು ಸಿಟಿ ಮಾರ್ಕೇಟ್ ಪೊಲೀಸ್ ಠಾಣೆ, ಹರೀಶ್‍ಕುಮಾರ್ ಪಿ.ಎಂ ಅವರನ್ನು ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಿಗೆ 40 ಇನ್ಸ್‍ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆಗೊಳಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ.  