ರಶ್ಮಿ ಸಾಮಂತ್ ಬೆಂಗಳೂರು: ಉಡುಪಿ ಕಾಲೇಜೊಂದರಲ್ಲಿ ನಡೆದಿದ್ದ ವಿಡಿಯೊ ಚಿತ್ರೀಕರಣ ಪ್ರಕರಣಕ್ಕೆ ಕೋಮುವಾದಿ ಆಯಾಮ ನೀಡಿದ್ದ ಸ್ವಘೋಷಿತ ಹಿಂದೂ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್‌, ಇದೀಗ ತನ್ನ ನೂತನ ಕೃತಿಯಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜನಾಂಗೀಯವಾದಿ ಎಂದು ಆರೋಪಿಸುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿನ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಕುರಿತು ‘A Hindu in Oxford’ ಎಂಬ ನೂತನ ಕೃತಿಯನ್ನು ರಚಿಸಿರುವ ರಶ್ಮಿ ಸಾಮಂತ್, ಅದರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜನಾಂಗೀಯವಾದಿ ಎಂದು ಹೇಳಿಕೊಂಡಿದ್ದಾರೆ.“ಆಕ್ಸ್ ಫರ್ಡ್ ವಿದ್ಯಾರ್ಥಿಗಳು ಓರ್ವ ಹಿಂದೂವನ್ನು ತಮ್ಮ ಅಧ್ಯಕ್ಷೆಯನ್ನಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲದೆ ಇದ್ದುದರಿಂದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಸ್ಥಾನವನ್ನು ಬಲವಂತವಾಗಿ ನಾನು ಕೆಳಗಿಳಿಯಬೇಕಾಯಿತು” ಎಂದು ರಶ್ಮಿ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂದು ಅಧ್ಯಕ್ಷ ಹುದ್ದೆಯಿಂದ ಹೊರದಬ್ಬಿಸಿಕೊಂಡಿದ್ದ ರಶ್ಮಿ ಸ್ಥಾನಕ್ಕೆ ನಂತರ ಚುನಾಯಿತರಾದ ಭಾರತೀಯ ಮೂಲದ ಹಿಂದೂವೇ ಆದ ಅನ್ವೀ ಭೂತಾನಿ ಹೇಳಿದ್ದು, ಮತ್ತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿ ವಿರುದ್ಧ ಟೀಕೆ ವ್ಯಕ್ತವಾಗಿದೆ. ರಶ್ಮಿ ಸಾಮಂತ್‌ ಅವರ ಕೃತಿಯು ತಪ್ಪು ನಿರೂಪಣೆಯನ್ನು ಹಂಚಿದೆ ಎಂದು ಅನ್ವೀ ಭೂತಾನಿ ದೂರಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ತಾರತಮ್ಯದ ಸಮಸ್ಯೆ ಇದ್ದರೂ, ರಶ್ಮಿ ಸಾಮಂತ್‌ ಅವರನ್ನು ‘ಜನಾಂಗ, ಧರ್ಮ ಅಥವಾ ರಾಷ್ಟ್ರೀಯತೆ’ಯ ಕಾರಣಕ್ಕಾಗಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ರಶ್ಮಿ ಸಾಮಂತ್‌ ಕೃತಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಆಕ್ಸ್ ಫರ್ಡ್ ವಿಶ್ವವಿದ್ಯಾಲಯಕ್ಕೆ ರಶ್ಮಿ ಕ್ಷಮಾಪಣಾ ಪತ್ರ ನೀಡಿದ್ದನ್ನು ನೆನಪಿಸಿದ್ದಾರೆ.ರಶ್ಮಿ ಸಾಮಂತ್ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ, ಬಲಿಪಶು ನಾಟಕವನ್ನು ಆಡುತ್ತಿದ್ದಾರೆ ಹಾಗೂ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.2021 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ಅಲ್ಪಾವಧಿಯಲ್ಲೇ ಯೆಹೂದಿ ವಿರೋಧಿ, ಜನಾಂಗೀಯವಾದಿ ಮತ್ತು ಟ್ರಾನ್ಸ್‌ಫೋಬಿಕ್ ಪೋಸ್ಟ್‌ ಗಳನ್ನು ಮಾಡಿದ್ದು ಬಯಲಾಗಿತ್ತು. ಅದರ ಬೆನ್ನಲ್ಲೇ ಅವರು ಸಂಘದ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕಾಗಿತ್ತು.ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾಲೇಜೊಂದರ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಿಸಿದ ಘಟನೆಗೆ ಸಂಬಂಧಿಸಿದಂತೆ ರಶ್ಮಿ ಸಾಮಂತ್‌ ತನ್ನ ಟ್ವಿಟರ್ ಖಾತೆಯಲ್ಲಿ ಹಲವು ದಾರಿ ತಪ್ಪಿಸುವ ಸುಳ್ಳು ಮಾಹಿತಿ ನೀಡಿದ್ದರು. ಆ ಮೂಲಕ ಕನಾಟಕದ ಅತಿ ಸೂಕ್ಷ್ಮ ಕರಾವಳಿಯಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹಾಗೂ ಉದ್ವಿಗ್ನತೆ ಪ್ರಚೋದಿಸಲು ಪ್ರಯತ್ನಿಸಿದ್ದಾಗಿ ಆರೋಪಿಸಲಾಗಿತ್ತು. ರಶ್ಮಿ ಸಾಮಂತ್‌ ಅವರು ಬಲಪಂಥೀಯ ಸಾಮಾಜಿಕ ಮಾಧ್ಯಮದ ಇತರ ಬಳಕೆದಾರರ ಜೊತೆ ಮಾಡಿದ ಈ ಪ್ರತಿಪಾದನೆಗಳು ಸುಳ್ಳು ಎಂಬುವುದು ಉಡುಪಿ ಪೊಲೀಸರ ಸ್ಪಷ್ಟನೆಯಿಂದ ಸಾಬೀತಾಗಿತ್ತು. Rashmi Samant on Odd Day - let's feed on others' vulnerability. Rashmi Samant on Even Day - How dare you make me feel vulnerable. I guess education at Oxford does not help one with internalised hatred. When bigots like rashmi samant are able to make their way to universities like Oxford and win student union elections there, it really makes you question the merit it takes to get into the world's top universities. Hindus calling out 'A Hindu in Oxford' book. pic.twitter.com/sDXtnA7EV6 When bigots like rashmi samant are able to make their way to universities like Oxford and win student union elections there, it really makes you question the merit it takes to get into the world's top universities. 