ಮೈಸೂರು,ಆ.7: ಮೈಸೂರು ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಕೆಗೆ ನಿರ್ಬಂಧ ವಿಧಿಸಿ ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.ಈ ಬಗ್ಗೆ ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ. ಅರಮನೆಯ ಸುತ್ತಮುತ್ತ ಪ್ರದೇಶ ಹಳದಿ ವಲಯ ಎಂದು ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.  ಈ ಪ್ರದೇಶದಲ್ಲಿ ಡ್ರೋನ್  ಕ್ಯಾಮರಾವನ್ನು ಬಳಸಲು ಮೈಸೂರು ಅರಮನೆ ಮಂಡಳಿಯಿಂದ ಪೂರ್ವಾನುಮತಿ ಪಡೆಯುವುದು ಅವಶ್ಯಕವಾಗಿದೆ.  ಡ್ರೋನ್ ಕ್ಯಾಮೆರಾ ಬಳಸಲು ಅನುಮತಿ ಪಡೆಯದೆ ಇದ್ದರೆ ಕ್ರಮವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.  