ಸಾಂದರ್ಭಿಕ ಚಿತ್ರ (PTI)ಶಿವಮೊಗ್ಗ, ಆ.6: ಗುಂಡು ತಗುಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ದಾಸನಗದ್ದೆಯಲ್ಲಿ ಸಂಭವಿಸಿದೆ.  ರಾಕೇಶ್ (32) ಎಂಬವವರು ಗಾಯಗೊಂಡವರಾಗಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಆರಗ ಸಮೀಪದ ದಾಸನಗದ್ದೆಯಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ತೋಟಕ್ಕೆ ಬಂದೂಕು ತೆಗೆದುಕೊಂಡು ಹೋಗಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎಂದು ಹೇಳಲಾಗುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.  ಈ ಸಂಬಂದ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.