ಬೆಂಗಳೂರು: ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲೊಂದಾದ ಗೃಹ ಜ್ಯೋತಿ ಗೆ ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.ಕಲಬುರಗಿಯ ಎನ್ ವಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಇಂಧನ ಸಚಿವ ಕೆ ಜೆ ಜಾರ್ಜ್ ಸಹಿತ ಹಲವು ಸಚಿವರು, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.  ಈ ಯೋಜನೆಗೆ ಈಗಾಗಲೇ 1.42ಕೋಟಿಗೂ ಅಧಿಕ ಕುಟುಂಬಗಳು ನೋಂದಾವಣೆಯಾಗಿದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.ಇಂದು ಕಲ್ಬುರ್ಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.ನುಡಿದಂತೆ ನಡೆಯುತ್ತಿದ್ದೇವೆ, ನಾವು ನೀಡಿದ್ದ ಗ್ಯಾರಂಟಿಗಳೆಲ್ಲವನ್ನೂ ಜಾರಿಗೊಳಿಸುತ್ತಿದ್ದೇವೆ.ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನೀತಿಯಿಂದ ಕಂಗಾಲಾಗಿರುವ ಜನತೆಗೆ ನಮ್ಮ ಗ್ಯಾರಂಟಿ ಯೋಜನೆಗಳು ದುಬಾರಿ ಬದುಕಿಗೆ ನಿರಾಳತೆಯನ್ನು ನೀಡುತ್ತವೆ.ಕನ್ನಡಿಗರಿಗೆ ನೆಮ್ಮದಿಯ… 