ಸಾಗರ  : ತಾಲೂಕಿನ ಉಳ್ಳೂರು ಸಮೀಪದ ಸಂಪಿಗೆಸರ ಬಳಿ ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ವರದಿಯಾಗಿದೆ.ಬಸ್ ಮುಂಭಾಗದ ದ್ವಿಚಕ್ರ ವಾಹನ ಸವಾರನನ್ನು ತಪ್ಪಿಸಲು ಹೋಗಿ ಹೆದ್ದಾರಿ ಪಕ್ಕಕ್ಕೆ ಬಸ್ ಉರುಳಿದೆ ಎಂದು ಹೇಳಲಾಗುತ್ತಿದೆ.ತೀವ್ರ ಮಳೆ ಇರುವ ಕಾರಣ ಹೆದ್ದಾರಿ ಜಾರುವಿಕೆಯಿಂದ ಬಸ್ ರಸ್ತೆಯ ಪಕ್ಕಕ್ಕೆ ಜಾರಿದೆ ಎನ್ನಲಾಗಿದೆ.ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಬಸ್ ಇದಾಗಿದ್ದು ಬಸ್ ನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಹಲವರಿಗೆಗಾಯಗಳಾಗಿದ್ದು ಅವರನ್ನು ಸಾಗರದ ಆಸ್ಪತ್ರೆಗೆ ಸಾಗಿಸಲಾಗಿದೆ.  