ಬೆಂಗಳೂರು: ʼʼನಮ್ಮ ಸರ್ಕಾರ ರಾಜ್ಯದ ಯುವಕರ ಕೈಗೆ ಉದ್ಯೋಗ ಕೊಡುತ್ತದೆ ಹೊರತು ಕೇಸರಿ ಶಾಲು, ತ್ರಿಶೂಲಗಳನ್ನಲ್ಲʼʼ ಎಂದು ಕಾಂಗ್ರೆಸ್‌ ಹೇಳಿದೆ. ಶುಕ್ರವಾರ  ಟ್ವೀಟ್‌ ಮಾಡಿರುವ ಕಾಂಗ್ರೆಸ್‌,  ʼʼಬಿಜೆಪಿ ಅವಧಿಯಲ್ಲಿ ರಾಜ್ಯದ ಘನತೆ ಮಣ್ಣುಪಾಲು ಮಾಡಿದ್ದರ ಪರಿಣಾಮ ಹೂಡಿಕೆಗಳು ಪರರಾಜ್ಯದತ್ತ ಮುಖ ಮಾಡಿದ್ದವು, ಕಾಂಗ್ರೆಸ್ ಸರ್ಕಾರ ಬಂದಿದ್ದೆ ತಡ, ಹೂಡಿಕೆಗಳು ಕರ್ನಾಟಕದತ್ತ ಹರಿದು ಬರುತ್ತಿದೆ, ಹೂಡಿಕೆದಾರರಿಗೆ ರಾಜ್ಯದ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿದೆʼʼ ಎಂದು ತಿಳಿಸಿದೆ. ʼʼ13 ಸಾವಿರ ಉದ್ಯೋಗ ಸೃಷ್ಟಿʼʼʼʼಫಾಕ್ಸ್ ಕಾನ್ ಸಂಸ್ಥೆ ಈ ಹಿಂದಿನ ಐಫೋನ್ ತಯಾರಿಕಾ ಘಟಕದ ಒಪ್ಪಂದವಲ್ಲದೆ ಮತ್ತೊಂದು 5000 ಕೋಟಿ ಮೊತ್ತದ ಹೂಡಿಕೆ ಮಾಡಲು ತಯಾರಾಗಿದೆ.  ಇದರಿಂದ 13 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆʼʼ ಎಂದು ಕಾಂಗ್ರೆಸ್‌ ವಿಶ್ವಾಸ ವ್ಯಕ್ತಪಡಿಸಿದೆ.   