ಸಾಂದರ್ಭಿಕ ಚಿತ್ರಕುಶಾಲನಗರ,ಆ.3: ಸೆಲ್ಫಿ ತೆಗೆಯಲು ಮುಂದಾದ ಪ್ರವಾಸಿ ಯುವಕನೋರ್ವ ನೀರು ಪಾಲಾದ ಘಟನೆ ಹಾರಂಗಿಯಲ್ಲಿ ನಡೆದಿರುವುದು ವರದಿಯಾಗಿದೆ.ನೀರು ಪಾಲಾದ ಯುವಕ ಬೆಂಗಳೂರು ಮೂಲದ ಸಂದೀಪ್ ಎನ್ನಲಾಗಿದೆ. ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಬಳಿ ಸೆಲ್ಫಿ ತೆಗೆಯಲು ಮುಂದಾದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಯುವಕ, ಮೂವರು ಸ್ನೇಹಿತರೊಂದಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅಗ್ನಿಶಾಮಕದಳದವರು ಸಂದೀಪ್ ದೇಹದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. 