ಶಿವಮೊಗ್ಗ, ಜು.21: ಪೊಕ್ಸೊ ಕಾಯ್ದೆಯಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ನಗರದ ಚರ್ಚ್‌ ಒಂದರ ಫಾದರ್ ಫ್ರಾನ್ಸಿಸ್ ಫರ್ನಾಂಡಿಸ್ ಗೆ ಶುಕ್ರವಾರ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಗುರುವಾರ ಅವರನ್ನು  ಬಂಧಿಸಿದ ಕೋಟೆ ಸ್ಟೇಷನ್ ಪೊಲೀಸರು, ಆರೋಪಿಯನ್ನು ವೈದ್ಯಕಿಯ ಪರೀಕ್ಷೆಗೆ ಒಳಪಡಿಸಿ ಶಿವಮೊಗ್ಗ 1ನೇ ಹೆಚ್ಚುವವರ ಜಿಲ್ಲಾ ಸತ್ರ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾದೀಶರು ಆರೋಪಿಯನ್ನು  14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 