ಬೆಂಗಳೂರು: ''ರಾಜಕೀಯ ದ್ವೇಷಕ್ಕೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ'' ಎಂದು ಕೆಆರ್​ಪಿಪಿ ಸ್ಥಾಪಕ ಅಧ್ಯಕ್ಷ ಹಾಗು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.ಗುರುವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೆಹಬೂಬ್ ಬಾಷಾ ಎಂಬ ನಮ್ಮ ಪಕ್ಷದ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ರಾಜಕೀಯ ದ್ವೇಷದಿಂದ ಈ ಕೊಲೆ ನಡೆದಿದೆ'' ಎಂದು ಆರೋಪಿಸಿದರು. ''ಮೃತ ಮೆಹೆಬೂಬ್ ಬಾಷಾ ನಮ್ಮ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. 20 ವರ್ಷಗಳ ನಂತರ ಮತ್ತೆ ಬಳ್ಳಾರಿ ಯಲ್ಲಿ ಈ ರೀತಿ ಕೊಲೆಯಾಗಿದೆ. ಆರೋಪಿಗಳಿಹೆ ಗಲ್ಲು ಶಿಕ್ಷೆಯಾಗಬೇಕು'' ಎಂದು ಒತ್ತಾಯಿಸಿದರು. 