ಬೆಳಗಾವಿ, ಜು.12: ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳಗಾವಿಯ  ಮಾರುತಿ ನಗರದ ಗಜಾನನ ಪಾಟೀಲ್ (40) ಬಂಧಿತ ಆರೊಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಯು ಟ್ಯೂಷನ್‌ಗೆ ಹೋಗುತ್ತಿದ್ದ 9  ನೇ ತರಗತಿ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಹೋಗಿ ಅಪಹರಿಸಲು ಯತ್ನಿಸಿದ್ದ, ಈ ವೇಳೆ ಬಾಲಕಿ ಕಿರುಚಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಈ ಘಟನೆಯ ಬಗ್ಗೆ ಆತಂಕಿತರಾದ ಹೆತ್ತವರು ಟಿಳಕವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸದ್ಯ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.