ಬಂಧಿತ ಆರೋಪಿಗಳು ದಾವಣಗೆರೆ.ಜು.8: ಅನೈತಿಕ ಪೊಲೀಸ್ ಗಿರಿ ತೋರಿ ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಎಸ್ಪಿ ಡಾ.ಕೆ.ಅರುಣ್, ಯುವಕರ ಜೊತೆ ನಗರದ ಗೀತಾಂಜಿಲಿ ಚಿತ್ರಮಂದಿರಕ್ಕೆ ದಲಿತ ಯುವತಿಯೊಬ್ಬಳು ಆಗಮಿಸಿದ್ದಳು. ಇದನ್ನು ಕಂಡ ದೊಡ್ಡೇಶ್ ಹಾಗೂ ಆತನ ಸ್ನೇಹಿತರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಎಂದರು.  ದೂರಿನ ಅನ್ವಯ ದೊಡ್ಡೇಶ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದರು. ವಿಡಿಯೋ ಹರಿಬಿಟ್ಟಿದ್ದ ಆರೋಪಿ: ಅನೈತಿಕ ಪೊಲೀಸ್ ಗಿರಿ ತೋರಿ ಯುವಕರ ಮೇಲೆ ಹಲ್ಲೆ ನಡೆಸುವ ವೀಡಿಯೊವನ್ನು ಆರೋಪಿ ದೊಡ್ಡೇಶ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ಈ ವೀಡಿಯೋದಲ್ಲಿ ಆರೋಪಿಗಳು ಯುವತಿಗೆ ಬೆದರಿಕೆ ಹಾಕುವುದು ಕೂಡ ದಾಖಲಾಗಿದೆ.  