ಫೋಟೋ- Twitter@DCPSouthTrBCPಬೆಂಗಳೂರು: ನಗರದ ಮಡಿವಾಳ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, ಏಕಾಏಕಿ ಹೈಡ್ರಾಲಿಕ್ ಕ್ರೈನ್​ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ವರದಿಯಾಗಿದೆ.ಕಾರ್ಮಿಕರು ಕಡಿಮೆ ಇದ್ದುದರಿಂದ ಸಂಭವನೀಯ ದುರಂತ ತಪ್ಪಿದೆ ಎಂದು ತಿಳಿದು ಬಂದಿದೆ.ಪಿಲ್ಲರ್​ಗೆ ಹಾಕುವ ತಂತಿ ಮೇಲೆ ಎತ್ತುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಕಂಬಿಗಳನ್ನು ಮೇಲೆತ್ತಿದ್ದ ವೇಳೆ ಕ್ರೇನ್ ಹಠಾತ್ ಆಗಿ ಕುಸಿದು ಬಿದ್ದಿದೆ. ಇದರಿಂದ ಕೆಲ ಹೊತ್ತು ಮಡಿವಾಳ ಜಂಕ್ಷನ್ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಹಾಗೂ ಸಿಬ್ಬಂದಿ ದೌಡಾಯಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಪ್ರತ್ಯೇಕ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.