 ಬೆಂಗಳೂರು: ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೋರ್ವ ಸಾಕಿದ ನಾಯಿಗೆ ಕಟ್ಟಿದ್ದ ಬೆಬೆಲ್ಟ್ ನಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಭೌಮನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.ಆರ್ಯಮಾನ್ ಘೋಷ್ (22) ಆತ್ಮಹತ್ಯೆಗೆ ಶರಣಾದ ಯುವಕ. ಅಪಾರ್ಟ್ ಮೆಂಟ್ ನ ಬಾಡಿಗೆ ಫ್ಲಾಟ್ ನಲ್ಲಿ ವಾಸವಾಗಿದ್ದ ಯುವಕ, ಜೊತೆಗೆ ನಾಯಿ ಸಾಕಿಕೊಂಡಿದ್ದ. ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ಆರ್ಯಮಾನ್, ಇತ್ತೀಚೆಗೆ ಖಿನ್ನತೆಗೆ ಒಳಗಾದವನಂತೆ ಕಂಡುಬರುತ್ತಿದ್ದ ಎನ್ನಲಾಗಿದೆ.  ನನ್ನ ಸಾವಿಗೆ ನಾನೇ ಕಾರಣ, ಐಯ್ಯಾಮ್ ಸಾರಿ ಎಂದು  ಸಾಯುವ ಮೊದಲು ಯುವಕ ಡೆತ್ ನೋಟ್ ಬರೆದಿದ್ದಾನೆ. ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.  