ಬೆಂಗಳೂರು: 'ನಮ್ಮ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಾರ್ವಜನಿಕರು ಸಲಹೆ ನೀಡುವಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಆಸಕ್ತರು http://brandbengaluru.karnataka.gov.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ ನಿಮ್ಮ ಸಲಹೆಗಳನ್ನು ನಮಗೆ ಕಳಿಸಬಹುದು. ಅಥವಾ 9480685700 ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಮಾಡಬಹುದು'' ಎಂದು ತಿಳಿಸಿದ್ದಾರೆ. ''ಸಲಹೆಗಳನ್ನು ಕಳಿಸಲು ಜುಲೈ 20. ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ  1533ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ''ಎಂದು ಮಾಹಿತಿ ನೀಡಿದ್ದಾರೆ.  