ಹುಬ್ಬಳ್ಳಿ: ಪತಿಯೊಬ್ಬ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಘಟನೆ ನೇಕಾರ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.ಕೊಲೆಗೀಡಾದ ಮಹಿಳೆಯನ್ನು  ಸುಧಾ ಹಿರೇಮಠ (20) ಎಂದು ಗುರುತಿಸಲಾಗಿದೆ. ಪತಿ ಶಿವಯ್ಯ ಹಿರೇಮಠ ಕೊಲೆಗೈದು ಹೊರಗಿಂದ ಬಾಗಿಲು ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.   ಪ್ರೀತಿಸಿ ಮದುವೆಯಾಗಿದ್ದ ಶಿವಯ್ಯ ಮತ್ತು ಸುಧಾ ದಂಪತಿಗೆ ಒಂದೂವರೆ ತಿಂಗಳ ಮಗು ಇದೆ ಎಂದು ತಿಳಿದು ಬಂದಿದೆ.  ಮಗು ಅಳುತ್ತಿದ್ದುದನ್ನು ಕೇಳಿ ಬಾಗಿಲು ತೆರೆದ ಸ್ಥಳೀಯರಿಗೆ ಘಟನೆಯ ಬಗ್ಗೆ ಅರಿವಾಗಿದೆ ಎನ್ನಲಾಗಿದ್ದು, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು  