ಮಲ್ಲಿಕಾರ್ಜುನ ಕಡಕೋಳ / ಸುಜಾತ ಜಂಗಮ ಶೆಟ್ಟಿ / ಶ್ರೀ ವೆಂಕಟರಮಣ ಐತಾಳ / ಸತೀಶ್ ತಿಪಟೂರು / ಶ್ರೀ ರಾಜು ತಾಳಿಕೋಟೆ / ಶ್ರೀ ಪ್ರಸನ್ನ ಸಾಗರ /ಬೆಂಗಳೂರು: ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.ಮೈಸೂರು ರಂಗಾಯಣದ ನಿರ್ದೇಶಕರಾಗಿ ಸತೀಶ್ ತಿಪಟೂರು, ಧಾರವಾಡ-ರಾಜು ತಾಳಿಕೋಟೆ, ಶಿವಮೊಗ್ಗ-ಪ್ರಸನ್ನ ಡಿ. ಸಾಗರ, ಕಲಬುರ್ಗಿ-ಡಾ.ಸುಜಾತ ಜಂಗಮ ಶೆಟ್ಟಿ, ವೃತ್ತಿ ರಂಗಭೂಮಿ ರಂಗಾಯಣ-ದಾವಣಗೆರೆ-ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಡಕೋಳ, ಯಕ್ಷರಂಗಾಯಣ ಕಾರ್ಕಳದ ನಿರ್ದೇಶಕರಾಗಿ ವೆಂಕಟರಮಣ ಐತಾಳ ಅವರನ್ನು ನೇಮಕ ಮಾಡಲಾಗಿದೆ.  ಸದಸ್ಯರ ನೇಮಕ: ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ಅಕ್ಷತಾ ಎಂ.ನಾಯಕ್ ಮಂಗಳೂರು, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ವಿನೋದ್ ಮೂಡಗಡದ್ದೆ, ಶಿಲ್ಪಾಕಲಾ ಅಕಾಡೆಮಿ-ಸದಸ್ಯರನ್ನಾಗಿ ರಾಘವೇಂದ್ರ ಕಿನ್ನಾಳ ಕೊಪ್ಪಳ, ಶಿವಪ್ರಸಾದ್ ಚನ್ನಪಟ್ಟಣ ಹಾಗೂ ಎಚ್.ಎಸ್.ಮಂಜುನಾಥ ಹಾಸನ ಹಾಗೂ ಬಯಲಾಟ ಅಕಾಡಮಿ ಸದಸ್ಯರನ್ನಾಗಿ ಲಕ್ಷ್ಮಣ ಹಣಮಂತ ದೇಸಾರಟ್ಟಿ ಬಾಗಲಕೋಟೆ ಇವರನ್ನು ನೇಮಕ ಮಾಡಲಾಗಿದೆ.  ಆರು ರಂಗಾಯಣಗಳ ನೂತನ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣದ ಕಾರ್ಯ ಚಟುವಟಿಕೆಗಳನ್ನು ವೇಗಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.  