ಮಂಡ್ಯ, ಜು.1: ಮದ್ದೂರು ಪಟ್ಟಣದ ಸಮೀಪದ ಹಳ್ಳದಲ್ಲಿ(ಕೊಲ್ಲಿ ಕಾಲುವೆ) ಈಜುತ್ತಿದ್ದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.ಪಟ್ಟಣದ ರಾಮ್-ರಹೀಮ್ ನಗರದ ನಾಲ್ಕನೇ ಕ್ರಾಸ್‍ನ ವಾಸಿ ಅಹಮ್ಮದ್ ಪಾಷಾ ಅವರ ಮಗ ಅಜಲಮ್ ಪಾಷಾ(16) ಹಾಗೂ ಅಕ್ಮಲ್ ಅವರ ಮಗ ಮುಹಮ್ಮದ್ ಅಲಿ(13) ಸಾವನ್ನಪ್ಪಿದ ಬಾಲಕರು.  ಮೃತ ಬಾಲಕರ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  