ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ  NH4 ರಲ್ಲಿ ಗುರುವಾರ ನಸುಕಿನ ಜಾವ ಖಾಸಗಿ ಬಸ್ ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತಪಟ್ಟವರನ್ನು ಸದಾನಂದ ಬೆಳಗಾವ್( 50 ವರ್ಷ), ವೀರಬಸಪ್ಫ (22 ವರ್ಷ) ಎಂದು ಗುರುತಿಸಲಾಗಿದೆ.ಮೃತರು ಚಾಲಕ ಹಾಗೂ ಪ್ರಯಾಣಿಕ ಎನ್ನಲಾಗಿದೆ.ಬೆಂಗಳೂರಿನಿಂದ ಮಿರಜ್ ಕಡೆ ಪ್ರಯಾಣ ಮಾಡುತ್ತಿದ್ದ ಬಸ್ ಚಾಲಕನ ಅತಿವೇಗದಿಂದ ಡಿವೈಡರ್  ಗೆ ಗುದ್ದಿ ಪಲ್ಟಿಯಾಗಿದೆ.ಸ್ಥಳಕ್ಕೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಘಟನೆಯು ಬ್ಯಾಡಗಿ ಪೋಲಿಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದಿದೆ.