ಕಲಘಟಗಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರನ್ನು ಕಾರ್ಮಿಕ ಸಚಿವ ರೈತ ಮಹಿಳೆಯರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಈ ಸಂಬಂಧ ರೈತ ಮಹಿಳೆಯರ ಜೊತೆಗಿನ ಫೋಟೊ ಹಂಚಿಕೊಂಡಿರುವ ಸಚಿವರು,  ''ನಮ್ಮ ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಗಳಗಿ ಹುಲಕೊಪ್ಪ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಈ ತಾಯಂದಿರ ಭೇಟಿ ಮತ್ತು ಮಾತುಕತೆ ಇಂತಹ ಕೋಟ್ಯಂತರ ಅನ್ನದಾತರಿಗಾಗಿ ಇನ್ನಷ್ಟು ಸೇವೆ ಮಾಡುವ ನವಚೈತನ್ಯ ನೀಡಿದೆ'' ಎಂದು ಹೇಳಿದ್ದಾರೆ. ''ಹೊಲಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯುವ ಈ ರೈತ ಮಾತೆಯರ ಅಕ್ಕರೆಯ ಮಾತುಗಳು, ನಿಸ್ವಾರ್ಥ ಪ್ರೀತಿಗಳೇ ನನಗೆ ನಿಜವಾದ ಶ್ರೇಯಸ್ಸು'' ಎಂದು ಬರೆದುಕೊಂಡಿದ್ದಾರೆ.   